ರಾಜ್ಯದ ಹಲವೆಡೆ ಇಂದು ಸಾಧಾರಣ ಮಳೆ. ಇನ್ನೂ 3 ದಿನ ಮಳೆ ಮುನ್ಸೂಚನೆ.

Share this post

ರಾಜ್ಯದಲ್ಲಿ ಮತ್ತೆ ಮಳೆ ಆರಂಭವಾಗಿದೆ, ತಡರಾತ್ರಿ ನಿನ್ನೆ ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಹಲವು ಮಳೆ ಸುರಿದಿದ್ದು, ರಾತ್ರಿ ಬಂದ ಮಳೆಗೆ ಕೆಲವು ಗಂಟೆಗಳ ಕಾಲ ಸಂಚಾರ ಅರ್ಥ ವ್ಯವಸ್ಥೆಗೊಂಡಿದ್ದು, ಮರ ಗಿಡಗಳು ಮತ್ತು ಕೊಂಬೆಗಳು ಬಿದ್ದಿವೆ.

rainfall
rain fall in karnataka today

ಕರ್ನಾಟಕ ರಾಜ್ಯ ಪ್ರಾಕೃತಿಕ ವಿಕೋಪ x ಖಾತೆಯಲ್ಲಿ ಅಧಿಕೃತ ಮಾಹಿತಿ.

Karnataka state natural disaster monitoring centre ಇಂದು ರಾಜ್ಯದಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆಯನ್ನು ನೀಡಿದ್ದು, ಅಧಿಕೃತ ಮಾಹಿತಿಯನ್ನು ತನ್ನ ಎಕ್ಸ್ ಖಾತೆಯಲ್ಲಿ ಬಿತ್ತರಿಸಿದೆ.

https://x.com/karnatakasndmc/status/2104516285656887436?s=46

ಕರ್ನಾಟಕದ ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡಿನಲ್ಲಿ ಸೆಪ್ಟೆಂಬರ್ 28ರಿಂದ 29 ತಾರೀಕಿನವರೆಗೆ ಕೆಲವೆಡೆ ಮಳೆ ಸುರಿಯಲಿದೆ ಎಂದು ತಿಳಿಸಲಾಗಿದೆ.

ಇದನ್ನೂ ಓದಿ : ಕರ್ನಾಟಕ ರೇಷನ್ ಕಾರ್ಡ್ e-KYC ಸರ್ವರ್ ಕಿರಿಕಿರಿ: ಸಾಮಾನ್ಯ ಜನರ ಸಂಕಷ್ಟ ಮತ್ತು ಸುಲಭ ಪರಿಹಾರಗಳು.

ಮುಂದಿನ 3 ದಿನಗಳ ಕಾಲ ಗುಡುಗು ಸಹಿತ ಮಳೆ.

ಹಾಗೆ ಮುಂದಿನ ಮೂರು ದಿನಗಳವರೆಗೆ ಮೋಡ ಕವಿದ ವಾದಾವರಣ ಸಾಪೇಕ್ಷ ಆದ್ರತೆ ಮಳೆ ಮತ್ತು ತಾಪಮಾನ ಹಾಗೂ ಗಂಟೆಗೆ 30 ರಿಂದ 40 km ವೇಗದಲ್ಲಿ ಗಾಳಿ ಬೀಸಲಿದೆ ಎಂದು ಮುನ್ಸೂಚನೆಯನ್ನು ನೀಡಿದೆ..

ಕರಾವಳಿ ಜಿಲ್ಲೆಗಳಿಗೆ ಭಾರೀ ಮಳೆ ಮುನ್ಸೂಚನೆ.

ಕರಾವಳಿ ಜಿಲ್ಲೆಗಳಾದ ಉಡುಪಿ ಮಂಗಳೂರು ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಂದು ವಾರ ಮಳೆ ಮುನ್ಸೂಚನೆಯನ್ನು ನೀಡಿದೆ.

ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನಲ್ಲಿ ಇಂದು ಮದ್ಯಾಹ್ನ ಮಳೆ.

ಇಂದು ಅಂದ್ರೆ ಮಧ್ಯಾಹ್ನ 2 ಗಂಟೆ ಸುಮಾರಿಗೆ ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಬಿಸಳಹಳ್ಳಿ ಮತ್ತು ಅಣುರು ಗ್ರಾಮಗಳಲ್ಲಿ ಮೋಡಕವಿದ ವಾತಾವರಣ ಇದ್ದು ಸಾಧಾರಣ ಮಳೆ ಸುರಿದಿದೆ.

ಸಾಧಾರಣ ಮಳೆ ಚಿತ್ರ
ಮೋಡ ಕವಿದ ವಾತಾವರಣ ಮತ್ತು ಸಾಧಾರಣ ಮಳೆ ಚಿತ್ರ

ಈ ಕೆಳಗೆ ಇರುವ ಚಿತ್ರದಲ್ಲಿ ನೀವು ನೋಡಬಹುದು. ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನಲ್ಲಿ ನಿನ್ನೆ ಬೆಳಗ್ಗಿನಿಂದ ರಾತ್ರಿ ತನಕ ಮೋಡ ಕವಿದ ವಾತಾವರಣ ಇದ್ದು, ತಾಪಮಾನ ಸುಮಾರು ನಾಲ್ಕರಿಂದ ಐದು ಡಿಗ್ರಿ ಕಡಿಮೆಯಾಗಿದೆ.

rain in byadgi taluk bisalahalli
rain in bisalahalli, byadgi taluk

ಸದ್ಯ ಮುಂಗಾರು ಹಂಗಾಮಿನ ಮೆಕ್ಕೆಜೋಳ ಜೋಳ ಹಾಗೂ ರಾಗಿ ಬೆಳೆಗಳು ಕಟಾವಿಗೆ ಬಂದಿದ್ದು, ರೈತರು ಈಗ ಹಟಾತ್ತನೆ ಬರುತ್ತಿರುವ ಮಳೆಯಿಂದ ತಮ್ಮ ಬೆಳೆಗಳನ್ನು ಸಂರಕ್ಷಿಸಿಕೊಳ್ಳಬೇಕು.

ಹಿಂದಿನ ಮತ್ತು ಇವತ್ತಿನ ಮಳೆಯ ಅಧಿಕೃತ ಮಾಹಿತಿಯನ್ನು ನೀವು ಲೇಖನದ ಕೊನೆಯಲ್ಲಿ ನೀಡಿರುವ ಲಿಂಕನ್ನು ಒತ್ತಿ ಮಾಹಿತಿಯನ್ನು ಕಲೆ ಹಾಕಬಹುದು.

ಇನ್ನು ಹೆಚ್ಚಿನ ಮಾಹಿತಿಗಳನ್ನು ಪಡೆಯಲು ನಮ್ಮ ಜಾಲತಾಣಕ್ಕೆ ಭೇಟಿ ಮಾಡುತ್ತೀರಿ ಮತ್ತು ಈ ಲೇಖನವನ್ನು ನಿಮ್ಮ ರೈತರ ಮಿತ್ರರೊಡನೆ ಶೇರ್ ಮಾಡುವ ಮೂಲಕ ಅವರಿಗೆ ತಲುಪಿಸಿ.

https://x.com/karnatakasndmc/status/2104516285656887436?s=46
karnataka state natural disaster management

Share this post

Leave a Comment

error: Content is protected !!